Sunday, May 16, 2010

ಮೆಚ್ಚುಗೆಯ ಮಾತುಗಳು

ನಮ್ಮ ಸಾಹಿತಿಗಳು , ಸಾಧಕರು , ಹಿಂದಿನ ಹಿರಿಯರನೇಕರು ತಮ್ಮ ವಾರಗೆಯವರು / ಹಿರಿಯರು / ಸಾಧಕರ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನಾಡಲು ತೋರಿದ ಜಾಣ್ಮೆ, ಬಳಸಿದ ಪದಗುಚ್ಛ ಗಮನಿಸುವಂಥದ್ದು. ಹಾಗೆ ಮೆಚ್ಚುಗೆಯ ಮಾತಾಡಲು ಬರೀ ಪದ ಗೊತ್ತಿದ್ದರೆ ಸಾಲದು ಸಹೃದಯವೂ ಬೇಕು. ಅಂಥ ಕೆಲವು ಸಹೃದಯತೆಯ ಸಾಲುಗಳ ಸಂಗ್ರಹಕ್ಕೆ ಈ ಪುಟ ಮುಡಿಪು.

{ ಮಾತು ಹೇಳಿದವರ ಹೆಸರನ್ನು ಹಸಿರು ಬಣ್ಣದಲ್ಲೂ ಮತ್ತು ಹೇಳಿಸಿಕೊಂಡವರ ಹೆಸರನ್ನು ನೀಲಿ ಬಣ್ಣದಲ್ಲೂ ಬರೆಯಲಾಗಿದೆ }



" ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ "
ಕುವೆಂಪು >> ಪಂಜೆಮಂಗೇಶರಾಯರು


ಹಸ್ತಕ್ಕೆ ಬರೆನಕ್ಕೆ, ಓದುತ್ತ ಓದುತ್ತ
ಮಸ್ತಕಕಿಟ್ಟು ಗಂಭೀರನಾದೆ
ವಿಸ್ತರದ ದರ್ಶನಕೆ ತುತ್ತ ತುದಿಯಲಿ ನಿನ್ನ
ಪುಸ್ತುಕಕೆ ಕೈಮುಗಿದೆ - ಮಂಕುತಿಮ್ಮ
ಕುವೆಂಪು >> ಡಿ.ವಿ.ಜಿ.



" ದಾಸರೆಂದರೆ ಪುರಂದರದಾಸರಯ್ಯಾ "
ವ್ಯಾಸರಾಯರು >> ಪುರಂದರದಾಸರು

 
ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು
ಕುವೆಂಪು >> ಕುಮಾರವ್ಯಾಸ









1 comment:

pavan katti said...

"mechhugeya matugalu" sahityasaktarige tumba hidiso bhaga...sadhyada mattige kelave matugalu iddaru saha avugalu hechhige adantella odugara asaktiyannu immadagolisuttade...

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/