Sunday, November 01, 2009

ಸ್ವಾಗತ : ಪರಿಚಯ : ಮುನ್ನುಡಿ


-- ಸ್ವಾಗತ : ಪರಿಚಯ : ಮುನ್ನುಡಿ --ನಮಸ್ತೆ... 

e - ನಾಡು ಕನ್ನಡ ತಾಣವನ್ನ ಸಂದರ್ಶಿಸುತ್ತಿರುವ ನಿಮಗೆ ಹೃತ್ಪೂರ್ವಕ ಸ್ವಾಗತ.


ಮೊದಲು ನನ್ನ ಪರಿಚಯ ಮಾಡ್ಕೊಂಡು ಬಿಡ್ತೀನಿ. 

ಇದು ನಾನು.


ನನ್ನ ಹೆಸರು ರೇವಪ್ಪ, ರೇವಪ್ಪ ಖ್ಯಾಡಿ. ಊರು ಚಡಚಣ ಅಂತ. 

ಸ್ವಲ್ಪ ವಿಚಿತ್ರ ಇದೆಯಲ್ಲಾ ಹೆಸರು ? !! ಇದು ವಿಜಾಪುರ ಕಡೆ ಹಳ್ಳಿ. 

ಕರ್ನಾಟಕದ ಗಡಿ ಹಳ್ಳಿ ಅಂದ್ರೂ ಸತ್ಯನೇ. 

೧೦ ನೇ ತರಗತಿವರೆಗೆ ಅನೇಕ ಭಾಗ್ಯಶಾಲಿ ಹುಡುಗರ ಹಾಗೆ ನಾನೂ ಕನ್ನಡ ಮಾಧ್ಯಮದಲ್ಲೇ ಓದಿದೆ. 

ನಂತರ 'ಎಲ್ಲರ' ಹಾಗೆ ವಿಜ್ಞಾನ ಪಿಯು ನಂತರ ವಿಜ್ಞಾನ ಬಿ.ಎಸ್ಸಿ. ನಂತರ .... 

ಹಾಗೇ ಸುಮ್ಮನೆ ಪರೀಕ್ಷೆ ಬರೆದೆ ವಿಧಾನಸೌಧದಲ್ಲಿ ಕೆಲಸ ಸಿಕ್ತು... 

ಮದ್ವೆ ಅಂದ್ರಾ ?!! ಇನ್ನೂ ದೂರ ಇದೆ ಬಿಡಿ. 

ಅವಳು ಹೇಳಿದಾಳೆ " ಮೊದ್ಲು ಕೆ.ಎ.ಎಸ್. ಬರಿ .....ಪಾಸಾಗು ಫೇಲಾಗು  ಅದು ಬೇಡ.

ಆಮೇಲೆ ಇದ್ದೇ ಇದೆಯಲ್ಲಾ.. ಸಂಸಾರ ಸಾಗರ.  "

ಅವಳ ಮಾತೂ ಸರಿ ಅನ್ಕೊಂಡು  ಸುಮ್ನಿದೀನಿ.

ಅಷ್ಟಕ್ಕೂ ನನ್ ವಯಸ್ಸು ಇನ್ನೂ 23 ಅಲ್ವೇ ? !!*************************


ಈ ಕಂಪ್ಯೂಟರ್ ಅನ್ನೋದು ಜಗತ್ತಿಗೆ ಪರಿಚಯವಾದ ದಿನದಿಂದ ಅದರ ಗುಣಗಾನ ನಡೀತಾನೇ ಇದೆ. ಜೊತೆಗೆ ಅಂತರ್ಜಾಲ ಅನ್ನೋ ಮಹಾಮಾಯೆ ಕಂಪ್ಯೂಟರ್ ನ ದೇಹವನ್ನ ಆವಾಹಿಸಿದ ನಂತರವಂತೂ ಕೇಳ್ಳೇ ಬೇಡಿ ಅದರ ಮಹಾತ್ಮೆ. ಈ ಜೋಡಿ ಏನಾದ್ರೂ ಒಂದೆರಡು ಶತಮಾನದ ಹಿಂದೆಯೇ ಪರಿಚಯವಾಗಿದ್ದಿದ್ರೆ ಹಳ್ಳಿ ಹಳ್ಳಿಗಳಲ್ಲಿ  ಈ ಜೋಡಿಯ ಮಹಾತ್ಮೆ  ಸಾರುವ ನಾಟಕ / ಬಯಲಾಟ / ಯಕ್ಷಗಾನ ... ಇತ್ಯಾದಿಗಳು ಬಂದು ಹೋಗಿರ್ತಿದ್ವು ಅನ್ಸುತ್ತೆ ... !!" ಅಂತರ್ಜಾಲ ಪವಾಡ " " ಗಣಕ ಮಹಾಶಯನ ಮಹಾತ್ಮೆ " ... ಏನೇನು ಹೆಸರಿಡ್ತಿದ್ರೋ ಅವಕ್ಕೆಲ್ಲಾ ... ಅಲ್ಲ ?


ಈಗ ವಿಷಯಕ್ಕೆ ಬರ್ತೀನಿ, ಕೇಳಿ. ಪರೀಕ್ಷಾ ದೃಷ್ಟಿಯಿಂದ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಬಳಕೆ ಏನಿದೆಯಲ್ಲಾ ಅದು  ಅಧ್ಯಯನಕ್ಕೆ ಒಂದು ಹೊಸ Way of Approach ಅನ್ಬಹುದು. ಈ ಹೊಸ Way of Approach ನಿಂದ Fascinate ಆಗಿನೇ ಈ ರೇವಪ್ಪ ಈ ಕೈಂಕರ್ಯಕ್ಕೆ ಕೈ ಹಾಕಿದಾನೆ. 


ನಾನು ನಂಗೆ ಬೇಕಾದ ಮಾಹಿತಿಗಾಗಿ ಅಂತರ್ಜಾಲ ತಡಕಾಡುತ್ತಿದ್ದಾಗ ಪದೇ ಪದೇ ನಾನು ಹುಡುಕುವ ಮಾಹಿತಿ ಸಿಕ್ಕುತ್ತಿದ್ದುದು ಆಂಗ್ಲ ಭಾಷೆಯ ತಾಣಗಳಲ್ಲಿ. ಕನ್ನಡ - ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಗಳೂ ಕೂಡ. ಜೊತೆಗೆ  ಈ ಆಂಗ್ಲ ಭಾಷೆಯ ತಾಣಗಳು ವಿಷಯವನ್ನ Present ಮಾಡೋ ರೀತಿ ಹೇಗಿದೆ ಗೊತ್ತಾ ? ' ಘಮಂಡ್ ' ನಿಂದ ಕೂಡಿರುತ್ತೆ ಬಹಳ ಸಾರಿ. ಜೊತೆಗೆ ಅನೇಕ ಹೊಸ ಹೊಸ Tool ಗಳನ್ನ ಅವರು ಬಳಸಿ ಅದು ಅವರಿಗೆ ಮಾತ್ರ ಗೊತ್ತು ಅನ್ನೋ ಥರ. ನಂಗೂ ಸಿಟ್ಟು ತಡೀಲಿಕ್ಕಾಗ್ಲಿಲ್ಲ. ಅವರಪ್ಪನ ಥರ ಸೈಟ್ ಮಾಡೋಣ ಅಂತ ನಿರ್ಧಾರ ಮಾಡಿ ಇದನ್ನ ನಿಮ್ಮ ಮುಂದಿಡ್ತಿದೀನಿ. ಒಪ್ಪಿಸ್ಕೋಬೇಕು. ಓಹ್ !! ಇದನ್ನ ಅಲ್ಲ .. ಇವನ್ನ. ಯಾಕಂದ್ರೆ ಒಟ್ಟು ನಾಲ್ಕು ಸಾಹಸಗಳಿದಾವೆ ಇಲ್ಲಿ :

  1. e - ನಾಡು ಕನ್ನಡ ( http://enaadukannada.blogspot.com/ )
  2. ಸ್ಪರ್ಧಾರ್ಥಿ ( http://spardharthi.blogspot.com/ ) - ಮಾತೃ ತಾಣ
  3. ಪ್ರಶ್ನೋತ್ತರ ( http://prashnottara.blogspot.com/ )
  4. e - ದಿನವಹಿ ( http://edinavahi.blogspot.com/ )
 

ಆಯಾ ತಾಣಗಳ ಬಗ್ಗೆ ಆಯಾ ತಾಣಕ್ಕೇ ಭೇಟಿ ನೀಡಿ ತಿಳ್ಕೋಳಿ.. ಆಯ್ತಾ ? ಈಗ ಪ್ರಸ್ತುತ e - ನಾಡು ಕನ್ನಡ ತಾಣದ ಬಗ್ಗೆ ಹೇಳ್ತೀನಿ ಕೇಳಿ. ಇದು ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ ಸಂಬಂಧಿತ ಮಾಹಿತಿ ನೀಡುವ ತಾಣ. ಇದು ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲಿಕ್ಕೆ One Stop Shop ಅಂತೂ ಖಂಡಿತ ಅಲ್ಲ. ಇಲ್ಲಿ ನೀಡಿರೋ ಸಮಸ್ತ ಮಾಹಿತಿ ಪರೀಕ್ಷಾ ದೃಷ್ಟಿಯಿಂದ ಹೆಕ್ಕಿ ತಂದು ಅದೇ ಧಾಟಿಯಲ್ಲಿ  ಅದನ್ನ Present ಮಾಡಿದೀನಿ. ನಾನಿಲ್ಲಿ ನೀಡುವ ಯಾವತ್ತೂ ಮಾಹಿತಿ ಕರಾರುವಕ್ಕಾಗಿರಿಸಲಿಕ್ಕೆ ಮತ್ತು ಅತ್ಯಂತ UptoDate ಆಗಿಸಲಿಕ್ಕೆ ೧೦೦ ಪ್ರತಿಶತ ಶ್ರಮ ಹಾಕ್ತೀನಿ. ಅದಕ್ಕೆ ನಿಮ್ಮ ಸಹಕಾರ ಅಂತೂ ಬೇಕೇ ಬೇಕು. ನಾನು ತಪ್ಪಿದಲ್ಲಿ ಎಡವಿದಲ್ಲಿ ತಲೆಗೊಂದು ಮೊಟಕಿ ಬುದ್ಧಿ ಹೇಳೋ ಸ್ವಂತಿಕೆಯನ್ನ ನಿಮಗೆಲ್ಲ ಈ ಮೂಲಕ ನೀಡ್ತಿದೀನಿ. ನನ್ನ ನಿಮ್ಮ ನಡುವೆ ಸ್ವಂತ ತಮ್ಮ - ಅಣ್ಣ  - ಗೆಳೆಯನ ಸಲುಗೆ ಇರಲಿ.. ಮುಂದುವರೆಯಲಿ ... ವೃದ್ಧಿಯಾಗಲಿ.


ನಿಮ್ಮ ಸಲಹೆ - ಮೆಚ್ಚು - ಚುಚ್ಚು ಎಲ್ಲವನ್ನೂ ನಂಗೆ ತಿಳಿಸಿ. ಸಂಕೋಚ ಬೇಡ. ದಾರಿ ಹೇಗೆ ಅಂತೀರಾ ? ನಾನು ದಿನಕ್ಕೆ  ಹತ್ತಿರತ್ತಿರ ೧೨ ಗಂಟೆ ಅಂತರ್ಜಾಲದ ಜೊತೆ ಸಂಪರ್ಕ ಇಟ್ಕೊಂಡಿರ್ತೀನಿ, ಬೆಂಗ್ಳೂರಲ್ಲಿದ್ರೆ. ಹೀಗಾಗಿ e-mail ಮಾಡಿದರೆ ಸಿಕ್ಕೇ ಸಿಗ್ತೀನಿ. ನನ್ನ email ವಿಳಾಸ : enaadukannada@gmail.com

ಜೊತೆಗೆ ಈ ಕಡೆ ಬಲಭಾಗದಲ್ಲಿ ಕಾಣ್ತಿದೆಯಲ್ಲಾ... ನನ್ನ ಬಗ್ಗೆ ಪುಟ್ಟ ಪರಿಚಯ ಇರೋ ಕಾಲಂ. ಅದರ ಕೆಳಗೆ ( 'ನಂಗೆ mail  ಮಾಡಬೇಕಾ ? ಇಲ್ಲಿ ಕ್ಲಿಕ್ಕಿಸಿ' ಅಂತ )  ಒಂದು ಲಿಂಕ್ ಇದೆ ನೋಡಿ. ಅದನ್ನ ಕ್ಲಿಕ್ಕಿಸಿದರೆ ಒಂದು ಪರದೆ ತೆರೆಯುತ್ತೆ. ಅದನ್ನ ಬಳಸಿ ಕೂಡ ನೀವು ನಂಜೊತೆ ಸಂಪರ್ಕ ಇಟ್ಕೋಬಹುದು. ಇದನ್ನ ಬಳಸಲಿಕ್ಕೆ ನೀವು ನಿಮ್ಮ mail account ಗೆ login ಆಗಬೇಕು ಅಂತ ಕೂಡ ಇಲ್ಲ. ಸರಿನಾ ?


ಇಷ್ಟು " ಉಭಯ ಕುಶಲೋಪರಿ ಸಾಂಪ್ರತ ".


ಇನ್ನುಳಿದಿರೋದನ್ನ ನಾವು ನೀವು ಎದುರಾದಾಗೆಲ್ಲಾ ಮಾತಡೋಣ ಆಯ್ತಾ ?


ಮತ್ತೆ ಸಿಗ್ತೀನಿ,
ರೇವಪ್ಪ1 comment:

srinivas said...

ಪ್ರಿಯ ಸಹೋದ್ಯೋಗಿ ಮಿತ್ರ ರೇವಪ್ಪ ನಿಮಗೆ ನನ್ನ ನಮಸ್ಕಾರಗಳನ್ನು ತಿಳಿಸುತ್ತಿರುವೆ. ನಿಮ್ಮ ಕ್ರಿಯಾಶೀಲತೆಗೆ ಈ ಅಂಕಣಗಳೇ ಸಾಕ್ಷಿ, ನಿಮ್ಮ ಸೇವೆ ಪಡೆಯುತ್ತಿರುವ ನಮ್ಮ ಸಚಿವಾಲಯ ನಿಜಕ್ಕೂ ಹೆಮ್ಮೆ ಪಡಬೇಕು, ನಮ್ಮೆಲ್ಲರಲ್ಲಿ ನೀವೊಬ್ಬ ಮೇರುವ್ಯಕ್ತಿಯಾಗಿ ಮೇಧಾವಿ ರೇವಪ್ಪ ನಮ್ಮ ಸಹೋದ್ಯೋಗಿಯಾಗಿರುವ ಸಂಗತಿ ಖುಷಿ ಕೊಡುವಂತಹದ್ದು ಹಾಗೇನೆ ಮಾರ್ಗದರ್ಶಿಮಿತ್ರ ನಮ್ಮೊಂದಿಗಿರುವುದು ನಮ್ಮ ಸುಕೃತವೇ ಸರಿ. ನನ್ನ ಅಂತರಾಳದ ಮಾತನ್ನು ನಿಮ್ಮೆದುರಿಗಿಡಲು ಬಯಸುತ್ತೇನೆ ಮಿತ್ರಾ,,, "ಅರಿತವನ ಹಿರಿತನವ ಅರಿತವನೆ ತಿಳಿಯಬೇಕು, ಬಂಜೆ ಅರಿವಳೆ ಹೆರಿಗೆ ನೋವನ್ನ, ಬರಿ ಬೊಗಳೆ ಅನ್ಯ ನುಡಿ ಕೇಳೋ ರೇವಣ್ಣ"

-ಸಿಕ್ಕಾಗ ಮಾತ್ನಾಡೋಣ
ನಿಮ್ಮ ಸೀನಣ್ಣ

ನಿಮ್ಮ ಗಮನಕ್ಕೆ :