: ರಾಷ್ಟ್ರ ರಂಗದಲ್ಲಿ ಕರ್ನಾಟಕ :
ಕೈಗಾ ಅಣು ವಿದ್ಯುತ್ ಸ್ಥಾವರ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಎಂಬಲ್ಲಿ ಸ್ಥಾಪನೆಯಾಗಿರುವ ಅಣು ವಿದ್ಯುತ್ ಸ್ಥಾವರ ದೇಶದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಇರುವ ಅಣುಸ್ಥಾವರಗಳಲ್ಲಿ ಒಂದು. NPCIL ( Nuclear Power Corporation of India Limited ) ಇದರ ಉಸ್ತುವಾರಿ ವಹಿಸಿಕೊಂಡಿದೆ. ಮಾರ್ಚ್ 2000ನೇ ಇಸ್ವಿಯಿಂದ ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಒಟ್ಟು ನಾಲ್ಕು ಘಟಕಗಳಿದ್ದು, ಐದನೇ ಘಟಕ ನಿರ್ಮಾಣ ಹಂತದಲ್ಲಿದೆ.
CFTRI ( Central Food Research Institute of India ), ಮೈಸೂರು : 1950 ಅಕ್ಟೋಬರ್ 21ರಂದು ಸ್ಥಾಪನೆಯಾದ ಈ ಸಂಸ್ಥೆ. ಇದು 1942ರಲ್ಲಿ ಸ್ಥಾಪನೆಯಾದ Council of Scientific & Industrial Research ಸಂಸ್ಥೆಯ ಅಧೀನದಲ್ಲಿ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ 39 ಪ್ರಯೊಗಾಲಯಗಳಲ್ಲಿ ಒಂದು.
NAL ( National Aerospace Laboratories ), ಬೆಂಗಳೂರು : ಇದೂ ಕೂಡ CSIR ಅಧೀನದ 39 ಪ್ರಯೋಗಾಲಯಗಳಲ್ಲಿ ಒಂದು. HAL ನಂತರ ಅಂತರಿಕ್ಷ ಪ್ರಯೋಗಗಳಿಗೆ ಇದೇ ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ. 1959ರಲ್ಲಿ ದೆಹಲಿಯಲ್ಲಿ ಸ್ಥಾಪನೆಯಾಗಿದ್ದ ಈ ಸಂಸ್ಥೆಯ ಕೇಂದ್ರ ಕಚೇರಿಯನ್ನ 1960ರಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಯಿತು.
C-MMACS ( CSIR centre for Mathematics Modelling And Computer Simulation ), ಬೆಂಗಳೂರು : CSIR ಅಧೀನದಲ್ಲಿರುವ ಮಗದೊಂದು ಪ್ರಯೋಗಾಲಯ. 1988ರಲ್ಲಿ NAL ಆವರಣದಲ್ಲಿ ಈ ಸಂಸ್ಥೆ ಆರಂಭಗೊಂಡಿದೆ. ಭೂಕಂಪ, ಚಂಡಮಾರುತ... ಇಂತಹ ಹವಾಮಾನ ವೈಪರೀತ್ಯಗಳನ್ನ ಪತ್ತೆ ಹಚ್ಚಿ ಪರಿಹಾರರೂಪದಲ್ಲಿ Computer Modelling ತಯಾರು ಮಾಡುವುದು ಈ ಸಂಸ್ಥೆಯ ಕೆಲಸ.
HAL ( Hindustan Aeronautics Limited ), ಬೆಂಗಳೂರು : ಇದು ಏಷಿಯಾದ ಅತಿ ದೊಡ್ಡ Aerospace ಕಂಪೆನಿಗಳಲ್ಲಿ ಒಂದು. 1940ರಲ್ಲಿ ಬೆಂಗಳುರಿನಲ್ಲಿ ಪ್ರಾರಂಭವಾಗಿ ಭಾರತದಲ್ಲಿ ಇನ್ನಿತರ 6 ಕಡೆ ಸಂಸ್ಥೆಗಳನ್ನ ಹೊಂದಿರುವ ಬೃಹತ್ ಸಂಸ್ಥೆ. ಭಾರತೀಯ ಸೇನೆಯ ವಾಯುಪಡೆಗೆ ಇದರ ಕೊಡುಗೆ ಅನನ್ಯ.
ಅ

No comments:
Post a Comment